ಮಹಾನಂದಿ		-
ಆಂಧ್ರಪದೇಶದಲ್ಲಿರುವ ಒಂದು ಪ್ರಸಿದ್ಧ ಜೈನತೀರ್ಥಕ್ಪೇತ್ರ. ಕರ್ನೂಲ್ ಜಿಲ್ಲೆಯಲ್ಲಿ ನಂದ್ಯಾಲ ತಾಲ್ಲೂಕಿನಲ್ಲಿ ನಂದ್ಯಾಲದಿಂದ ಸುಮಾರು 19 ಕಿಮೀ ದೂರದಲ್ಲಿದೆ. ನಲ್ಲಮಲೈ ಬೆಟ್ಟದ ಸಾನುವಿಗೆ ಆತುಕೊಂಡಿದೆ. ಇಲ್ಲಿ ಕಾಡು ದಟ್ಟವಾಗಿದೆ. ಮರಗಳು ಮುಗಿಲು ಮುಟ್ಟುತ್ತವೆಯೊ ಎನ್ನುವಂತೆ ನೀಳವಾಗಿ ಬೆಳೆದಿವೆ. ವಿಜಯನಗರದ ಅರಸರ ಅನೇಕ ಶಾಸನಗಳಲಿ ಇದರ ಉಲ್ಲೇಖವಿದೆ. ಕೃಷ್ಣದೇವರಾಯ ಹಾಗೂ ಆತನ ಸೋದರ ವೀರನರಸಿಂಹ ಮೊದಲಾದವರ  ಆಳ್ವಿಕೆಯಲ್ಲಿ ಅನೇಕ ದತ್ತಿಗಳನ್ನು ಈ ಕ್ಪೇತ್ರಕ್ಕೆಂದು ಬಿಟ್ಟುದು ಇಲ್ಲಿಯ ಶಾಸನಗಳಿಂದ ತಿಳಿದು ಬರುತ್ತದೆ. ದೇವಾಲಯ ನಾಗರೀಶೈಲಿಯಲ್ಲಿದೆ.  ಇಲ್ಲಿಯ ವಿಮಾನ ಅತ್ಯಂತ ಸುಂದರ ಹಾಗೂ ನಾಗರೀಶೈಲಿಗೆವ ದರಿಯಾಗಿದೆ. ದೇವಾಲಯದಲ್ಲಿ ನಂದಿಯ ಭವ್ಯಮೂರ್ತಿಯಿದೆ. ಇದೇ ಕಾರಣದಿಂದ ಈ ಕ್ಪೇತ್ರಕ್ಕೆ ಮಹಾನಂದಿಯೆಂದು ಹೆಸರು ಬಂದಿದೆ. ಬೆಟ್ಟದಲ್ಲಿ ಹುಟ್ಟುವ ಐದು ನೀರಿನ ಝರಿಗಳನ್ನು ಒಂದೆಡೆ ಸೇರಿಸಿ ಯಾರಿಗೂ ಕಾಣದ ರೀತಿಯಲ್ಲಿ ಹರಿಯಿಸಿಕೊಂಡು ಬಂದು ಪುಷ್ಕರಣಿಯಲ್ಲಿ ಒಂದೆಡೆ ಗೋಮುಖದ ಮೂಲಕ ಹರಿಯುವಂತೆ ಮಾಡಿದ್ದಾರೆ. ನೀರು ಸದಾ ಬೆಚ್ಚಗಿದ್ದು ತುಂಬ ಶುದ್ಧವಾಗಿದೆ. ಅದು ಕೆಳಗೆ ಹರಿದು ನೀರಾವರಿಗೂ ಉಪಯುಕ್ತವಾಗಿದೆ. ಈ ದೇವಾಲಯ ಲಿಂಗವನ್ನು ಶಂಕರಾಚಾರ್ಯರು ಸ್ಥಾಪಿಸಿದರೆಂದು ನಂಬಲಾಗಿದೆ. ಲಿಂಗದ ಬಳಿಯಲ್ಲಿ ಸಾಲಿಗಾರಮವಿದುದ ಅದು ವೈಷ್ಣವರಿಗೂ ಶ್ರೇಷ್ಠವೆನಿಸಿದೆ. ಲಿಂಗ ಸ್ವಯಂಭುವಾಗಿದುದ ಅದರ ಮೇಲೆ ಎರಡು ಸಣ್ಣ ಸಣ್ಣ ರಂಧ್ರಗಳಿವೆ. ಈ ಬಗೆಯ ಲಿಂಗರಚನೆ ಎಲ್ಲಿಯೂ ಕಾಣದೊರೆಯದು. ದೇವಾಲಯಕ್ಕೆ ಸಂಬಂಧಿಸಿದಂತೆ ಹಲವು ದಂತಕಥೆಗಳಿವೆ. ಮಹಾ ನಂದಿಯ ಪರಿಸರಲ್ಲಿ ಇನ್ನೂ ಹಲವು ನಂದಿಗಳಿದ್ದು ಈ ದೇವಾಲಯಗಳು ಸುಮಾರು 16 ಕಿಮೀ ವ್ಯಾಸಾರ್ಧರೇಖಾವಲಯದಲ್ಲಿವೆ. ಈ ಕಾರಣದಿಂದಲೇ ಈ ಭೂಭಾಗಕ್ಕೆ ನಂದ್ಯಾಲ (ನಂದಿಯಾಲಗಳಿರುವ ನೆಲ) ಎಂದು ಹೆಸರು ಬಂದುದಾಗಿ ಹೇಳುತ್ತಾರೆ. 												
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ